ಈಶ್ವರನ ದ್ರೋಣವ ಮಾಡಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಈಶ್ವರನ ದ್ರೋಣವ ಮಾಡಿ
ಪದ್ಮನಾಭನ ನಾರಿಯ ಮಾಡಿ
ಕಮಲಜನೆಂಬ ಬಾಣವ ತೊಟ್ಟು
ತ್ರಿಭುವನವನೆಚ್ಚವರಾರೊ ? ಚಂದ್ರಸೂರ್ಯರ ಬೆನ್ನ ಮೆಟ್ಟಿ
ಸುವರ್ಣದ ಮಳೆಯ ಕರಸಿದವರಾರೊ ? ದೇವದಾನವ ಮಾನವರೆಲ್ಲ
ಈ ಬಾಣಕ್ಕೆ ಗುರಿಯಾಗಿ ಬಿದ್ದರು. ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ !