Library-logo-blue-outline.png
View-refresh.svg
Transclusion_Status_Detection_Tool

ಈ ಶಿವಧ್ಯಾನದಲ್ಲಿ ಲಕ್ಷ್ಯತ್ರಯಂಗಳನರಿದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   ಲಕ್ಷ್ಯತ್ರಯಂಗಳನರಿದ
ಯೋಗೀಶ್ವರನು
ಮುಂದೆ
ಮುದ್ರಾತ್ರಯಂಗಳನರಿಯಬೇಕೆಂತೆನೆ
:
ಶಿವಧ್ಯಾನದಲ್ಲಿ
ಕುಳ್ಳಿರ್ದು
ನವದ್ವಾರಂಗಳಂ
ಬಲಿವುದೆ
ಷಣ್ಮುಖೀಮುದ್ರೆ.

ಷಣ್ಮುಖೀಮುದ್ರೆಯಿಂದೆ
ಒಳಗೆ
ನಾದಾನುಸಂಧಾನದಲ್ಲಿ
ಮನೋಮಾರುತಂಗಳು
ನಿಶ್ಚಲಮಾಗಿರ್ಪುದೆ
ಖೇಚರೀಮುದ್ರೆ
ಎನಿಸುವುದು.
ನೇತ್ರಂಗಳ
ತುದಿಯ
ಸೂಕ್ಷ್ಮರಂಧ್ರವನುಳ್ಳ
ಕೃಷ್ಣತಾರಾಮಂಡಲದಮಧ್ಯದಲ್ಲಿ
ಶುದ್ಧಚಿತ್ತದಿಂದೆ
ನಿಶ್ಚಲಮಾದ
ಪರಮಾತ್ಮಜ್ಯೋತಿಸ್ವರೂಪಮಪ್ಪ
ದಿವ್ಯಲಿಂಗಮಂ
ಕಾಣ್ಬುದೇ
ಶಾಂಭವೀಮುದ್ರೆಯೆನಿಸುವುದಯ್ಯಾ
ಅಖಂಡೇಶ್ವರಾ.