Library-logo-blue-outline.png
View-refresh.svg
Transclusion_Status_Detection_Tool

ಉಚ್ಛಿಷ್ಟದ ಉದಕದೊ?ಗೆ ಚಂದ್ರಮನ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಉಚ್ಛಿಷ್ಟದ ಉದಕದೊ?ಗೆ ಚಂದ್ರಮನ ನೆಳಲಿದ್ದಡೇನು
ಅಲ್ಲಿ ಚಂದ್ರಮನಿದ್ದಾತನೆ ? ಸಂಸಾರದ ವ್ಯಾಪ್ತಿಯಲ್ಲಿ ಶರಣನ ಕಾಯವಿರ್ದಡೇನು
ಅಲ್ಲಿ ಶರಣನಿದ್ದಾತನೆ ? ಕೆಸರೊಳಗಣ ತಾವರೆಯಂತೆ
ಮರದೊಳಗಣ ಬಯಲಿನಂತೆ. ಮಮ ಸಾಹಿತ್ಯರೂಪೇಣ ತಮೋಮಾಯೇ ವಿವರ್ಜಯೇತ್ ಮೇಘದುರ್ಮಲತೋಯಸ್ಥಂ ಕಮಲಪತ್ರಮಿವಾಚರೇತ್ ಇಂತೆಂದುದಾಗಿ
ಇದ್ದೂ ಇರನು
ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನು ಉಂಡುಪವಾಸಿ ಬಳಸಿ ಬ್ರಹ್ಮಚಾರಿ