ಉತ್ತರ ಲೋಕದಲ್ಲಿ ಸತ್ಯಜ್ಞಾನಾನಂದವೆಂಬ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಉತ್ತರ ಲೋಕದಲ್ಲಿ ಸತ್ಯಜ್ಞಾನಾನಂದವೆಂಬ ಅಂಗನೆ ಮೃತ್ಯುಲೋಕವನೆಯ್ದಲು ಆ ಶಕ್ತಿಯರ ಕೃತ್ಯಾಕೃತ್ಯಂಗಳು ಕೆಟ್ಟು ಆ ಲೋಕವೆಲ್ಲಾ ಭಕ್ತಿ ಸಾಮ್ರಾಜ್ಯವಾಯಿತ್ತು ನೋಡಾ. ಶಕ್ತಿ ಭಕ್ತಿಯೆಂಬ ಸತ್ಕ ೃತ್ಯ ನಷ್ಟವಾಗಿ ಮುಕ್ತ್ಯಂಗನೆಯ ಮುಖವ ನೋಡುತ್ತ ನೋಡುತ್ತ ಸಚ್ಚಿದಾನಂದೈಕ್ಯನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.