ಉದಕದಂತೆ? ಕರ್ತೃವಿಲ್ಲಾಗಿ ಕರ್ಮವಿಲ್ಲ,
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಉದಕದಂತೆ? ಕರ್ತೃವಿಲ್ಲಾಗಿ ಕರ್ಮವಿಲ್ಲ
ಕರ್ಮವಿಲ್ಲಾಗಿ ಜನನವಿಲ್ಲ
ಜನನವಿಲ್ಲಾಗಿ ಭೂತಾದಿ ಚರಿತ್ರ ಕರಣಾದಿ ಗುಣಂಗಳು ಮುನ್ನವೆ ಇಲ್ಲ. ಹಿಂದಣ ಜನನವಿಲ್ಲ
ಇಂದಿನ ಸ್ಥಿತಿಯಿಲ್ಲ
ಮುಂದಣ ಲಯವಿಲ್ಲ
ಆದಿ ಮಧ್ಯ ಅವಸಾನವಿಲ್ಲ
ಬಿಚ್ಚಿ ಬೇರಿಲ್ಲ
ಬೆರಸಿ ಒಂದಿಲ್ಲ. ಉಪಮಾತೀತ ಕೂಡಲಚೆನ್ನಸಂಗಾ ನಿಮ್ಮ ಶರಣನು