ಉದಕದೊಳಗೊಂದು ಸೆಜ್ಜೆಯಾಯಿತ್ತು. ಸೆಜ್ಜೆಯೊಳಗೊಂದು
ಗೋಚರ
ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಉದಕದೊಳಗೊಂದು
ಸೆಜ್ಜೆಯಾಯಿತ್ತು.
ಸೆಜ್ಜೆಯೊಳಗೊಂದು
ಕಿಚ್ಚು
ಹುಟ್ಟಿತ್ತು.
ಇದೇನೊ
ಇದೆಂತೊ
?
ನೀನರಸಿಹೆನೆಂಬ
ಸಂಬಂಧವಿಲ್ಲ.
ಇದೇನೊ
ಇದೆಂತೊ
?
ನೀನರಿದಿಹೆನೆಂಬ
ಸಂಬಂಧವಿಲ್ಲ.
ಇದೇನೊ
ಇದೆಂತೊ
?
ನೀನೊಲಿಸಿಹೆನೆಂಬ
ಸಂಬಂಧವಿಲ್ಲ.
ಉದಯಮುಖದಲ್ಲಿ
ಕತ್ತಲೆಯಡಗಿತ್ತು.
ಗುಹೇಶ್ವರನೆಂಬ
ನಾಮವಲ್ಲಿಯೆ
ನಿಂದಿತ್ತು.