ವಿಷಯಕ್ಕೆ ಹೋಗು

ಉದಕದ ಕೈಕಾಲ ಮುರಿದು,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಉದಕದ ಕೈಕಾಲ ಮುರಿದು
ಅಗ್ನಿಯ ಕಿವಿಮೂಗನರಿದು
ವಾಯುವ ತಲೆಯ ಕೊಯ್ದು
ಆಕಾಶವ ಶೂಲದಲಿಕ್ಕಿದ ಬಲ್ಲಿದ ತಳವಾರನೀತನು ! ಅರಸು ಪ್ರಧಾನ ಮಂತ್ರಿ ಮೂವರ ಮುಂದುಗೆಡಿಸಿದ ಬಲ್ಲಿದ ತಳವಾರನೀತನು ! ಒಂಬತ್ತು ಬಾಗಿಲ ಕದವನಿಕ್ಕಿ ಬಲಿದು ಬಿಯ್ಯಗವ ಹೂಡಿ ನವಸಾಸಿರ ಮಂದಿಯ ಕೊಂದುಳಿದನು ಗುಹೇಶ್ವರ.