ಉದಕ ಮಜ್ಜನವಲ್ಲ ಪತ್ರೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ. ಧೂಪ ಪರಿಮಳವಲ್ಲ
ಕಂಚು ಬೆಳಗಲ್ಲ
ಸಯಧಾನ ಅರ್ಪಿತವಲ್ಲ ! ಅದೆಂತೆಂದಡೆ: ಸಜ್ಜನವೆ ಮಜ್ಜನ
ಸತ್ಯಸದಾಚಾರವೆ ಪತ್ರೆ ಪುಷ್ಪ. ಅಷ್ಟಮದಂಗಳ ಸುಟ್ಟುದೆ ಧೂಪ
ನಯನವೆ ಸ್ವಯಂ ಜ್ಯೋತಿ
ಪರಿಣಾಮವೆ ಅರ್ಪಿತ ಕಾಣಾ ಗುಹೇಶ್ವರಾ.