ಉದಯಮುಖದ ಜ್ಯೋತಿ ಶರೀರತ್ರಯದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉದಯಮುಖದ ಜ್ಯೋತಿ ಶರೀರತ್ರಯದ ನುಂಗಿತ್ತು. ಮಧ್ಯಾಹ್ನಮುಖದ ಜ್ಯೋತಿ ಮಲತ್ರಯಂಗಳ ನುಂಗಿತ್ತು. ಅಸ್ತಮಯಮುಖದ ಜ್ಯೋತಿ ಅಹಂಕಾರತ್ರಯಂಗಳ ನುಂಗಿತ್ತು. ಈ ಮೂರು ಪ್ರಕಾರದ ಜ್ಯೋತಿಯ ಅಖಂಡ ಜ್ಞಾನಜ್ಯೋತಿ ನುಂಗಿತ್ತು. ಅಖಂಡ ಜ್ಞಾನಜ್ಯೋತಿ ಅವಿರಳಬ್ರಹ್ಮವನೆಯಿದಿ ನುಂಗಿ ಅಲ್ಲಿಯೆ ಅಡಗಿತ್ತು. ಅದು ಅಡಗಿದಲ್ಲಿ ತಾನಡಗಿದಾತನೇ ಶಿವಯೋಗಿ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.