ವಿಷಯಕ್ಕೆ ಹೋಗು

ಉದಯ ಮಧ್ಯಾಹ್ನ ಅಸ್ತಮಾನ-ತ್ರಿಕಾಲದಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಉದಯ ಮಧ್ಯಾಹ್ನ ಅಸ್ತಮಾನ-ತ್ರಿಕಾಲದಲ್ಲಿ ಪತ್ರೆ ಪುಷ್ಪ ಅಗ್ಗಣಿಯ ತಂದು ಮಜ್ಜನಕ್ಕೆ ನೀಡೆಹೆನೆಂದಡೆ ನೆನೆಯದು
ಬಲಿಯದು
ಗರಿಗಟ್ಟದಯ್ಯಾ. ನೀರ ತೋರಿದಡೆ ಒಂದು ಹನಿಯನೂ ಮುಟ್ಟದು. ನಿಮ್ಮ ಲಿಂಗದ ಪೂಜೆ ನಮ್ಮ ಜಂಗಮದ ಉದಾಸೀನ- ಇದ ಕಂಡು ನಾ ಬೆರಗಾದೆ
ಕೂಡಲಚೆನ್ನಸಂಗಮದೇವಾ.