ಉದಯ ಮುಖದ ಪ್ರಸಾದ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಉದಯ ಮುಖದ ಪ್ರಸಾದ ಸದಮಲದ ಬೆಳಗೇ ಸದ್ರೂಪವಾಗಿ ಸರ್ವಾಂಗವನೊಳಕೊಂಡಿತ್ತು ನೋಡಾ. ಆ ಪ್ರಸಾದ ಸರ್ವಾಂಗವನೊಳಕೊಂಡು ಮೂರ್ತಿಯಾಗಿ ಆ ಪ್ರಸಾದವೆ ತದಾಕಾರವಾಗಿ ನಿಲ್ಲಲು
ಆ ಪ್ರಸಾದದೊಳಗೆ ಆ ಅಂಗ ಬಯಲಾಯಿತ್ತು ನೋಡಾ. ಮಧ್ಯಾಹ್ನ ಮುಖದ ಪ್ರಸಾದ ಶುದ್ಧ ಸ್ವಯಂಜ್ಯೋತಿ ಚಿದ್ರೂಪವಾಗಿ ಮನವನೊಳಕೊಂಡಿತ್ತು. ಆ ಪ್ರಸಾದದಲ್ಲಿ ಆ ಮನ ಬಯಲಾಯಿತ್ತು ನೋಡಾ. ಅಸ್ತಮಯ ಮುಖದ ಪ್ರಸಾದ ಪ್ರಸನ್ನಿಕೆ ಶತಕೋಟಿ ಸೋಮ ಸೂರ್ಯರ ಉದಯದಂತೆ ಆನಂದ ಸ್ವರೂಪವಾಗಿ ಪ್ರಜ್ವಲಿಸುತ್ತಿದೆ ನೋಡಾ. ಆ ಪ್ರಸಾದವೆನ್ನ ಭಾವವ ನುಂಗಿತ್ತಾಗಿ
ಭಾವ ಬಯಲಾಯಿತ್ತು ನೋಡಾ. ಭಾವ ಬಯಲಾಯಿತ್ತಾಗಿ
ಆ ಪ್ರಸಾದ ನಿರ್ಭಾವ ಪ್ರಸಾದತ್ವನೆಯ್ದಿ
ನಿರ್ವಯಲಾಯಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.