ಉಪಚಾರದ ಗುರುವಿಂಗೆ ಉಪಚಾರದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯನು
ಉಪಚಾರದ ಲಿಂಗ ಉಪಚಾರದ ಜಂಗಮವು
ಉಪಚಾರದ ಪ್ರಸಾದವ ಕೊಂಡು
ಗುರುವಿಂಗೆ ಭವದ ಲೆಂಕನಾಗೆ
ಅಂಧನ ಕೈಯ ಅಂಧಕ ಹಿಡಿದಂತೆ_ ಇಬ್ಬರೂ ಹೊಲಬುಗೆಟ್ಟರು ಕಾಣಾ ಗುಹೇಶ್ವರಾ.