ಉಪಾಧಿಯನಳಿದು, ಪ್ರೇತಸೂತಕ ನಿರುಪಾಧಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉಪಾಧಿಯನಳಿದು
ನಿರುಪಾಧಿಯ ತಿಳಿದು
ಸಹಜಮಾಟದಲ್ಲಿ ಸುಳಿದು
ಜಾತಿಸೂತಕ ಪ್ರೇತಸೂತಕ ಜನನಸೂತಕ ಉಚ್ಚಿಷ್ಟಸೂತಕ ರಜಸ್ಸೂತಕವೆಂಬ ಪಂಚಸೂತಕಂಗಳ ಕಳೆದು
ಸದಾಚಾರ ಲಿಂಗಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರಂಗಳಳವಟ್ಟು ಪಂಚಭೂತಂಗಳ ಪರಿಹರಿಸಿ
ಪಂಚಪ್ರಾಣವಾಯುಗಳ ಸಂಚಲಗುಣವಳಿದು ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಂಗಳ ಪ್ರತಿಷಿ*ಸಿ
ಪಂಚಬ್ರಹ್ಮದ ಮೂಲವನರಿದು
ಮೂಲೋಕದೊಡೆಯನಲ್ಲಿ ಮನವಡಗಿರ್ಪ ಮಹಾಶರಣರ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.