ಉಭಯದಳವು
ನಡೆದು
ಬಂದು
ಮುಂದೆ
ನಿಂದಿರ್ದು
ಭಾಷೆಯಾಗಿ
ಬಿರಿದನುಚ್ಚರಿಸುತ್ತ
ಹೊಯಿಕುಟ್ಟಿಯಾಡುವ
ಕಾಳಗದೊಳಗೆ
ಕೈದು
ಬಿದ್ದಡೆ
ಭಂಗವಲ್ಲದೆ
ಶಸ್ತ್ರಸಾಧಕ
ಕಲಿತೇನೆಂದು
ಅಭ್ಯಾಸಮಾಡುವ
ಅಭ್ಯಾಸದೊಳಗೆ
ಕೋಲು
ಬಿದ್ದರೆ
ಭಂಗವೆ
?
ಅಲ್ಲ.
ಮತ್ತೆ
ಮರಳಿ
ಕೋಲು
ಕಳೆದುಕೊಂಡು
ಅಭ್ಯಾಸ
ಮಾಡುವುದೇ
ಉಚಿತವಲ್ಲದೆ;
ನಾನಿನ್ನು
ಅಭ್ಯಾಸವ
ಮಾಡಲಾಗದು
ಕೋಲು
ಬಿದ್ದಿತ್ತೆಂಬ
ಗಾವಿಲರ
ಮಾತ
ಕೇಳಲಾಗದು.
ದೃಷ್ಟವೇ
ಕೋಲು
ಅದೃಷ್ಟವೆ
ಕೈದು
(ಪ್ರಾಣ?).
ಕಾಣಬಾರದ
ಲಿಂಗವ
ಕಾಬುದು
ತನ್ನ
ಸತ್ಕ್ರೀ
ಕಾಣಾ
ಕೂಡಲಚೆನ್ನಸಂಗಯ್ಯಾ.