ಉಲಿಗರ ಮಾತು ಊರುಗರ ತೋಟಿಯೊಳಗುಂಟೆ ಲಿಂಗಾನುಭಾವ ? ರಚ್ಚೆಯ ಕೆಟ್ಟ ಬೀದಿಯ ಮಾತಿನೊಳಗುಂಟೆ ಲಿಂಗಾನುಭಾವ ? ಸಂತೆಯೊಳಗೆ ಸಮಾಧಿಯುಂಟೆ ? ಇದು ಕಾರಣ ಕೂಡಲಚೆನ್ನಸಂಗಯ್ಯನ ಅನುಭಾವ ಹೊರವೇಷದ ವಾಚಾಳರಿಗೆಲ್ಲಿಯದು.