Transclusion_Status_Detection_Tool

ಊರಿಗೆ ಹೋಗುವ ದಾರಿಯೊಳಗೊಬ್ಬ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಊರಿಗೆ ಹೋಗುವ ದಾರಿಯೊಳಗೊಬ್ಬ ಉಲುಗಿರಿ ಮನೆಯ ಮಾಡಿಕೊಂಡು
ದಾರಿಗೊಂಡು ಹೋಗುವ ಅಯ್ಯಗಳ ಬಾರಿಭೋ ಬಾರಿಭೋ ಎನುತ್ತೆ ೈದಾಳೆ ನೋಡಾ. ನಾರಿಯ ವಿಲಾಸವ ನೋಡಿ ದಾರಿಯ ತಪ್ಪಿದರು ನೋಡಾ ಅಯ್ಯಗಳು. ನಾರಿಯ ಕೊಂದಲ್ಲದೆ ದಾರಿಯ ಕಾಣಬಾರದು. ನಾರಿಯ ಕೊಂದು ದಾರಿಹಿಡಿದು ನಡದು ಊರ ಹೊಕ್ಕಲ್ಲದೆ ಉಪಟಳವಡಗದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.