ವಿಷಯಕ್ಕೆ ಹೋಗು

ಊರಿಗೆ ಹೋಹ ದಾರಿಯಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಊರಿಗೆ ಹೋಹ ದಾರಿಯಲ್ಲಿ ಒಂದು ಕೋಡಗ ಕುಳಿತಿಪ್ಪುದ ಕಂಡೆನಯ್ಯ. ಊರಿಗೆ ಹೋಹ ಅಣ್ಣಗಳ ಏಡಿಸಿ ಕಾಡುತ್ತಿದೆ ನೋಡಾ. ಕೋಡಗನ ಹಿಡಿದು ಕೊಡತಕ್ಕೆ ಹಾಕಿಹೆನೆಂದು ಹೋದರೆ
ಊರನೆಲ್ಲ ನುಂಗಿತ್ತು. ಆರಿಗೂ ಕಾಣಿಸದಿದೆ ಇದೇನು ಸೋಜಿಗವೋ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.