ಊರ ಮಧ್ಯದಲ್ಲಿ ಹುಟ್ಟಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಊರ ಮಧ್ಯದಲ್ಲಿ ಹುಟ್ಟಿದ ಕಿಚ್ಚು
ಮೇರುವೆಯ ಸುಟ್ಟಿತ್ತು ನೋಡಾ. ಕೇರಿಕೇರಿಯಲ್ಲಿ ಬೀದಿವರಿದು
ಅರಣ್ಯವನಾವರ್ತಿಸಿತ್ತು ನೋಡಾ. ಅರಣ್ಯದೊಳಗಿರ್ದ ಅಂಗನೆಯ ಮುಡಿ ಬೆಂದು
ಊರ ಹತ್ತಿರ ಕಿಚ್ಚು ಉಮಾಪತಿಯನಪ್ಪಲು ನಾರಿಪುರುಷರಳಿದು ಮಾರಾರಿಯೊಬ್ಬನೆ ಅದನು ನೋಡಿರೇ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.