ಊರ ಹೊರಗಣ ಮನೆಯೊಳಗೊಂದು ಉರಿಗಣ್ಣು ಹುಟ್ಟಿ ಈರೇಳುಲೋಕವ ನುಂಗಿ ಊರೆಲ್ಲವ ಸುಟ್ಟಿತ್ತು ನೋಡಾ. ಊರ ಸುಟ್ಟ ಉರಿಗಣ್ಣು ಅದು ಆರಿಗೂ ಕಾಣಬಾರದು. ಅದು ಮಾರಾರಿ ತಾನೆ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.