ಎಂಟುದಿಕ್ಕು ನಾಲ್ಕು ಬಾಗಿಲೊಳಗೆ
ಸಕಲ ಪದಾರ್ಥವೆಂಬ ಮಂಟಪವ ಮಾಡಿ
ನಾನಾ ಕೇರಿ ಬೀದಿವಾಗಿಲೊಳು ಅನಂತ ಬಣ್ಣಬಣ್ಣದ ಚೈತನ್ಯಗಳನನುಮಾಡಿ
ಅನಂತ ವೀರರನು ಅನಂತ ಲಾಳಮೇಳಿಗಳನು ಅನಂತ ಸೋಹಂ ಘನ ಮುಟ್ಟಿಕೊಂಡಿರ್ಪವರನು ತಂದಿರಿಸಿ ಆ ಮಂಟಪದೊಳಗೆ ಬಿಜಯ ಮಾಡೆಂದು_ ಭಕ್ತ್ಯಂಗನೆಯ ಕರೆಸಿ ಪರಿಪೂರ್ಣವಾಗಿರಿಸಿ ಜ್ಞಾನಾಂಗನೆಯ ಕರೆಸಿ ನಾಲ್ಕು ಬಾಗಿಲುಗಳಿಗೆ ಕಾಹ ಕೊಟ್ಟು ನುಡಿಯದಂತೆ ಗಂಡನು ಶಿವನಲ್ಲದೆ ಮತ್ತಿಲ್ಲವೆಂದಾತನ ಮಂಟಪದ ವಾರ್ತೆಯ ಅನ್ಯ ಮಿಶ್ರಂಗಳ ಹೊಗಲೀಸೆನೆಂಬ ಭಾಷೆ ! ಕಾಲ ಕರ್ಮ ಪ್ರಳಯವಿರಹಿತನೆಂದಾತನ ಹೆಸರು. ಮಹಾಪ್ರಳಯದಲ್ಲಿ ಅನಂತಮೂರ್ತಿಗಳು ಮಡಿವಲ್ಲಿ ಮಡಿಯದೆ ಉಳಿದ ನಿತ್ಯಸ್ವರೂಪನು. ಆತನ ಶ್ರೀಚರಣದೊಳಚ್ಚೊತ್ತಿದಂತಿರ್ಪಾತನೆ ಅನಾದಿ ಸಿದ್ಧನೆ
ಅನಾದಿ ಕುಳಜ್ಞನೆ
ಅನಾದಿ ಮಡಿವಾಳನೆ
ಶಿವನ ಮದಹಸ್ತಿಯೆ
ಹಸ್ತದೊಳು ಮದಂಗಳ ತೃಣವ ಮಾಡಿದ Zõ್ಞದಂತನೆ
ಭಕ್ತಿಸಾರಾಯ ಪ್ರಸಾದಪರಿಪೂರ್ಣನೆ ಕೂಡಲಚೆನ್ನಸಂಗನ ಮಹಾಮನೆಯಲ್ಲಿ
ಅನಾದಿಗಣೇಶ್ವರನು ಮಡಿವಾಳನು.