ವಿಷಯಕ್ಕೆ ಹೋಗು

ಎಂಟು ನೆಲೆಯ ಮಣಿಮಾಡದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಎಂಟು ನೆಲೆಯ ಮಣಿಮಾಡದ ಮಂಟಪದ ಮೇಲೆ
ಏಳು ವಶ್ಯ ಕನ್ನಿಕೆಯರು
ಮಹಾಲಿಂಗಕ್ಕೆ ಮಾಣಿಕದಾರತಿಯನೆತ್ತಿದರಲ್ಲಾ ! ಚಾಮರಂಗಳು ಬೀಸದೆ
ಮಾಣಿಕಸೂಸಕ ಕೆದರದೆ ಅಧರಪಟಂಗಳು ಹಳಚದೆ
ಸ್ವಯಲಿಂಗಾರ್ಚನೆಯ ಮಾಡುವಲ್ಲಿ ಪ್ರಸಾದಕ್ಕೆ ಕರುಣದಿಂ ದಯಮಾಡೈ (ದಯಮಾಡಿಸೈ?) ಗುಹೇಶ್ವರಾ.