ವಿಷಯಕ್ಕೆ ಹೋಗು

ಎದೆ ತುಂಬಿ ಹಾಡಿದೆನು

ವಿಕಿಸೋರ್ಸ್ದಿಂದ


ಎದೆ ತುಂಬಿ ಹಾಡಿದೆನು ಅಂದು ನಾನು |
ಮನವಿಟ್ಟು ಕೇಳಿದಿರಿ ಅಲ್ಲಿ ನೀವು ||


ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು |
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ |
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ||

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ |
ಹಾಡುವುದು ಅನಿವಾರ್ಯ ಕರ್ಮ ನನಗೆ |
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ |
ಹಾಡುವೆನು ಮೈದುಂಬಿ ಎಂದಿನಂತೆ |
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ ||


ರಚನೆ : ಜಿ.ಎಸ್.ಶಿವರುದ್ರಪ್ಪ
ಸಂಗೀತ : ಮೈಸೂರು ಅನಂತಸ್ವಾಮಿ

ಗಾಯನ : ಮೈಸೂರು ಅನಂತಸ್ವಾಮಿ
ಆಲ್ಬಂ : ಭಾವ ಸಂಗಮ

ಗಾಯನ : ರತ್ನಮಾಲ ಪ್ರಕಾಶ್
ಆಲ್ಬಂ : MSIL ಗೀತೆಗೆಳು ಭಾಗ 3 - ಎದೆ ತುಂಬಿ ಹಾಡಿದೆನು