Library-logo-blue-outline.png
View-refresh.svg
Transclusion_Status_Detection_Tool

ಎನಗೆ ಎನಗೆ ನೀನೇ

ವಿಕಿಸೋರ್ಸ್ದಿಂದ
Jump to navigation Jump to searchPages   (key to Page Status)   


ಎನಗೆ ನೀನೇ ಚಿದ್‍ಭಾಂಡವಯ್ಯಾ; ನಿನಗೆ ನಾನೇ ಚಿದ್‍ಭಾಂಡವಯ್ಯಾ. ಎನಗೆ ನೀನೇ ಚಿದ್‍ಭಾಜನವಯ್ಯಾ; ನಿನಗೆ ನಾನೇ ಚಿದ್‍ಭಾಜನವಯ್ಯಾ. ಎನಗೆ ನೀನೇ ಸಕಲ ದ್ರವ್ಯ ಪದಾರ್ಥವಯ್ಯಾ ; ನಿನಗೆ ನಾನೇ ಸಕಲದ್ರವ್ಯಪದಾರ್ಥವಯ್ಯ. ನಾನು ನೀನು ಒಂದೇ ಹರಿವಾಣದಲ್ಲಿ ಸಹಭೋಜನ ಮಾಡುತಿರ್ದೆವಾಗಿ
ಅಖಂಡೇಶ್ವರಾ
ನಾನು ನೀನೆಂಬುಭಯದ ಕೀಲು ಕಳಚಿತ್ತು ನೋಡಾ.