Library-logo-blue-outline.png
View-refresh.svg
Transclusion_Status_Detection_Tool

ಎನಗೆ ನಿಮ್ಮ ನೆನಹಾದಾಗ ಉದಯ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ಎನಗೆ ನಿಮ್ಮ ನೆನಹಾದಾಗ ಉದಯ
ಎನಗೆ ನಿಮ್ಮ ಮರಹಾದಾಗ ಅಸ್ತಮಾನ. ಎನಗೆ ನಿಮ್ಮ ನೆನೆಹವೆ ಜೀವನ
ಎನಗೆ ನಿಮ್ಮ ನೆನಹವೆ ಪ್ರಾಣ
ಕಾಣಾ ತಂದೆ. ಸ್ವಾಮಿ
ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ
ವದನದಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ.