ಎನ್ನನಿರಿದಡೆ ಸೈರಿಸುವೆ, ಎನ್ನ
ಗೋಚರ
ಲೇಖಕರು: ಅಕ್ಕ ಮಹಾದೇವಿ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎನ್ನನಿರಿದಡೆ ಸೈರಿಸುವೆ
ಎನ್ನ ಕೊರೆದಡೆ ಸೈರಿಸುವೆ
ಎನ್ನ ಕಡಿದು ಹರಹಿದಡೆ ಮನಕ್ಕೆ ತಾರೆನು. ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣರನೊಡನೆನ್ನ ಕಣ್ಣ ಮುಂದೆ ಕಂಡು ಮೊಗೆದುಂಡಮೃತದಂತೆ ಆದೆನಯ್ಯಾ.