ಎನ್ನ ಅನುಭಾವದ ಗಮ್ಯವೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎನ್ನ ಅನುಭಾವದ ಗಮ್ಯವೆ
ಎನ್ನ ಅರಿವಿನ ವಿಶ್ರಾಮವೆ
ಎನ್ನ ಭಾವದ ಬಯಕೆಯೆ
ಎನ್ನ ನಿಜದ ನಿಲವೆ
ಎನ್ನ ಪರಿಣಾಮದ ಮೇರುವೆ
ಎನ್ನ ಮನದ ಮಹಿಮನೆ
ನಿಮ್ಮ ಸುಳುಹು ಎತ್ತಲಡಗಿತ್ತು
ಎಲೆ ಲಿಂಗವೆ ? ನಿಮ್ಮ ನಾಮವೆತ್ತ ನಿರ್ನಾಮವಾಯಿತ್ತು
ಎಲೆ ಪರಮಗುರುವೆ ? ಕೂಡಲಚೆನ್ನಸಂಗಯ್ಯನಲ್ಲಿ ಉರಿಯುಂಡ ಕರ್ಪುರದಂತಾದೆಯಲ್ಲಾ ಪ್ರಭುವೆ !