ವಿಷಯಕ್ಕೆ ಹೋಗು

ಎನ್ನ ಅಯ್ಯಾ. ಆರುಚಕ್ರಂಗಳಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಎನ್ನ
ಆರುಚಕ್ರಂಗಳಲ್ಲಿ
ಪೂರೈಸಿ
ತುಂಬಿರ್ಪ
ಪರಮಾತ್ಮನು
ನೀನೇ
ಅಯ್ಯಾ.
ಎನ್ನ
ನರನಾಳಂಗಳಲ್ಲಿ
ಹೊಳೆದು
ಸುಳಿವ
ಪರವಸ್ತುವು
ನೀನೇ
ಅಯ್ಯಾ.
ಎನ್ನ
ಕರ
ಮನ
ಭಾವದ
ಒಳಹೊರಗೆ
ತೊಳಗಿ
ಬೆಳಗುವ
ಪರಬ್ರಹ್ಮವು
ನೀನೇ
ಅಯ್ಯಾ.
ಎನ್ನ
ಬ್ರಹ್ಮರಂಧ್ರದ
ಸಹಸ್ರದಳಕಮಲಮಧ್ಯದಲ್ಲಿ
ನಿರಂತರ
ಬೆಳಗುವ
ಪರಂಜ್ಯೋತಿ
ನೀನೇ
ಅಯ್ಯಾ
ಅಖಂಡೇಶ್ವರಾ.