ಎನ್ನ ಅರಿವಿನ ಕಣ್ಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎನ್ನ ಅರಿವಿನ ಕಣ್ಣ ಕತ್ತಲೆಯ ಕಳೆವಡೆ
ಸಂಗನಬಸವಣ್ಣನಲ್ಲದೆ ಮತ್ತಾರನೂ ಕಾಣೆನು. ಎನ್ನ ಭಾವವ ನಿರ್ಭಾವದಲ್ಲಿ ನಿಶ್ಶೂನ್ಯವಮಾಡಿ ಪರಮಸುಖದೊಳಿರಿಸುವಡೆ
ಅಲ್ಲಮಪ್ರಭುದೇವರಲ್ಲದೆ ಮತ್ತಾರನೂ ಕಾಣೆನು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಬಸವ-ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿದ್ದೆನು.