ಎನ್ನ ತನುವೆ ಬಸವಣ್ಣನು. ಎನ್ನ ಮನವೆ ಚೆನ್ನಬಸವಣ್ಣನು. ಎನ್ನ ಪ್ರಾಣವೆ ಪ್ರಭುದೇವರು. ಎನ್ನ ಸರ್ವಕರಣಂಗಳೆಲ್ಲ ಅಸಂಖ್ಯಾತ- ಮಹಾಗಣಂಗಳಾಗಿರ್ಪರಾಗಿ ಅಖಂಡೇಶ್ವರಾ ನಿಮ್ಮೊಳಗೆ ನಿಜವು ಸಾಧ್ಯವಾಯಿತ್ತಯ್ಯಾ ಇಂದೆನಗೆ.