ಎನ್ನ
ಕಾಯಕ್ಕೆ
ಸೀಮೆಯ
ಮಾಡುವೆನು;
ಎನ್ನ
ಕಾಯದೊಳಗಿರ್ದ
ಕರಣಾದಿ
ಗುಣಂಗಳಿಗೆ
ಸೀಮೆಯ
ಮಾಡುವೆನು.
ಎನ್ನ
ಶ್ರೋತ್ರಕ್ಕೆ
ಸೀಮೆಯ
ಮಾಡುವೆನು;
ಎನ್ನ
ಶ್ರೋತ್ರದೊಳಗಿರ್ದ
ಶಬ್ದಕ್ಕೆ
ಸೀಮೆಯ
ಮಾಡುವೆನು.
ಎನ್ನ
ತ್ವಕ್ಕಿಗೆ
ಸೀಮೆಯ
ಮಾಡುವೆನು;
ಎನ್ನ
ತ್ವಕ್ಕಿನೊಳಗಿರ್ದ
ಸ್ಪರ್ಶಕ್ಕೆ
ಸೀಮೆಯ
ಮಾಡುವೆನು.
ಎನ್ನ
ನಯನಕ್ಕೆ
ಸೀಮೆಯ
ಮಾಡುವೆನು;
ಎನ್ನ
ನಯನದೊಳಗಿರ್ದ
ರೂಪಕ್ಕೆ
ಸೀಮೆಯ
ಮಾಡುವೆನು.
[ಎನ್ನ
ಜಿಹ್ವೆಗೆ
ಸೀಮೆಯ
ಮಾಡುವೆನು;
ಎನ್ನ
ಜಿಹ್ವೆಯೊಳಗಿರ್ದ
ರಸಕ್ಕೆ
ಸೀಮೆಯ
ಮಾಡುವೆನು.]
ಎನ್ನ
ಘ್ರಾಣಕ್ಕೆ
ಸೀಮೆಯ
ಮಾಡುವೆನು;
ಎನ್ನ
ಘ್ರಾಣದೊಳಗಿರ್ದ
ಗಂಧಕ್ಕೆ
ಸೀಮೆಯ
ಮಾಡುವೆನು.
ಎನ್ನ
ಮನಕ್ಕೆ
ಸೀಮೆಯ
ಮಾಡುವೆನು;
ಎನ್ನ
ಮನದೊಳಗಿರ್ದ
ಮರವೆಗೆ
ಸೀಮೆಯ
ಮಾಡುವೆನು.
ಎನ್ನ
ಭಾವಕ್ಕೆ
ಸೀಮೆಯ
ಮಾಡುವೆನು;
ಎನ್ನ
ಭಾವದೊಳಗಿರ್ದ
ಭ್ರಾಂತಿಗೆ
ಸೀಮೆಯ
ಮಾಡುವೆನು.
ಎನ್ನ
ಪ್ರಾಣಕ್ಕೆ
ಸೀಮೆಯ
ಮಾಡುವೆನು
ಎನ್ನ
ಪ್ರಾಣವ
ಲಿಂಗದಲ್ಲಿ
ಹಿಂಗದಂತೆ
ನಿಲಿಸುವೆನು
ಕೂಡಲಚೆನ್ನಸಂಗಮದೇವಾ.