ಎನ್ನ ತನುವಿಕಾರದ ಭಯ,
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎನ್ನ ತನುವಿಕಾರದ ಭಯ
ಎನ್ನ ಮನವಿಕಾರದ ಭಯ
ತನುಮನವನಂಡಲೆವ ಧನವಿಕಾರದ ಭಯ ನೋಡಾ. ಹಗಲು ಹಸಿವಿನ ಚಿಂತೆ
ಇರುಳು ವಿಷಯದ ಚಿಂತೆ; ಹಗಲಿರುಳು ಸಾವವೊಡಲನೆ ಸಂತವಿಡುತಿಹ ಚಿಂತೆಯದಲ್ಲದೆ ಸದಾ ಶಿವನ ಧ್ಯಾನತತ್ಪರನಾಗಿ ಶಿವತತ್ವವಿಚಾರದೊಳಗೆ ಇರಲೊಲ್ಲೆನು ನೋಡಾ. ಸುಧೆಯನೊಲ್ಲದೆ ಹಡಿಕೆಗೆ ಮಚ್ಚಿದ ಸ್ವಾನನ ವಿದ್ಥಿಯಂತಾಯಿತ್ತಯ್ಯ. ಅಮೃತಮಯ ಲಿಂಗಸಂಗವನೊಲ್ಲದೆ ಸಂಸಾರಸಂಗಕ್ಕೆ ಮಯ್ಯಾನುವ ಮರುಳುಮನವೆ ನಿನ್ನ ನಾನೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.