ಎನ್ನ ತನುವಿನೊಳಗೆ ತನುವಿನೊಳಗೆ

ವಿಕಿಸೋರ್ಸ್ದಿಂದ



Pages   (key to Page Status)   


ಎನ್ನ ತನುವಿನೊಳಗೆ ನಿಮ್ಮ ತನುವಡಗಿರ್ಪುದು ; ನಿಮ್ಮ ತನುವಿನೊಳಗೆ ಎನ್ನ ತನುವಡಗಿರ್ಪುದು. ಎನ್ನ ಮನದೊಳಗೆ ನಿಮ್ಮ ಮನವಡಗಿರ್ಪುದು ; ನಿಮ್ಮ ಮನದೊಳಗೆ ಎನ್ನ ಮನವಡಗಿರ್ಪುದು. ಎನ್ನ ಪ್ರಾಣದೊಳಗೆ ನಿಮ್ಮ ಪ್ರಾಣವಡಗಿರ್ಪುದು ; ನಿಮ್ಮ ಪ್ರಾಣದೊಳಗೆ ಎನ್ನ ಪ್ರಾಣವಡಗಿರ್ಪುದು. ಎನ್ನ ಜೀವದೊಳಗೆ ನಿಮ್ಮ ಜೀವವಡಗಿರ್ಪುದು ; ನಿಮ್ಮ ಜೀವದೊಳಗೆ ಎನ್ನ ಜೀವವಡಗಿರ್ಪುದು. ಎನ್ನ ಭಾವದೊಳಗೆ ನಿಮ್ಮ ಭಾವವಡಗಿರ್ಪುದು ; ನಿಮ್ಮ ಭಾವದೊಳಗೆ ಎನ್ನ ಭಾವವಡಗಿರ್ಪುದು. ಎನ್ನ ಕರಣಂಗಳೊಳಗೆ ನಿಮ್ಮ ಕರಣಂಗಳಡಗಿರ್ಪುವು ; ನಿಮ್ಮ ಕರಣಂಗಳೊಳಗೆ ಎನ್ನ ಕರಣಂಗಳಡಗಿರ್ಪುವು. ಎನ್ನ ಇಂದ್ರಿಯಂಗಳೊಳಗೆ ನಿಮ್ಮ ಇಂದ್ರಿಯಂಗಳಡಗಿರ್ಪುವು ; ನಿಮ್ಮ ಇಂದ್ರಿಯಂಗಳೊಳಗೆ ಎನ್ನ ಇಂದ್ರಿಯಂಗಳಡಗಿರ್ಪುವು. ಎನ್ನ ವಿಷಯಂಗಳೊಳಗೆ ನಿಮ್ಮ ವಿಷಯಂಗಳಡಗಿರ್ಪುವು ; ನಿಮ್ಮ ವಿಷಯಂಗಳೊಳಗೆ ಎನ್ನ ವಿಷಯಂಗಳಡಗಿರ್ಪುವು. ನಾನು ನೀನೆಂಬ ಭಿನ್ನಭಾವವಳಿದು ಪುಷ್ಪಪರಿಮಳದಂತೆ
ರೂಪುರುಚಿಯಂತೆ ಅವಿರಳ ಸಮರಸವಾಗಿರ್ದೆಯ್ಯಾ ಅಖಂಡೇಶ್ವರಾ.