Library-logo-blue-outline.png
View-refresh.svg
Transclusion_Status_Detection_Tool

ಎನ್ನ ನಿಮ್ಮ ಘ್ರಾಣದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಎನ್ನ
ಘ್ರಾಣದ
ಕೊನೆಯಲ್ಲಿ
ನೀವು
ಗಂಧಪದಾರ್ಥವ
ಗ್ರಹಿಸುತಿರ್ಪಿರಿ:
ನಿಮ್ಮ
ಘ್ರಾಣದ
ಕೊನೆಯಲ್ಲಿ
ನಾನು
ಗಂಧಪ್ರಸಾದವ
ಗ್ರಹಿಸುತಿರ್ಪೆನಯ್ಯಾ.
ಎನ್ನ
ಜಿಹ್ವೆಯ
ಕೊನೆಯಲ್ಲಿ
ನೀವು
ರುಚಿಪದಾರ್ಥವ
ಗ್ರಹಿಸುತಿರ್ಪಿರಿ:
ನಿಮ್ಮ
ಜಿಹ್ವೆಯ
ಕೊನೆಯಲ್ಲಿ
ನಾನು
ರುಚಿಪ್ರಸಾದವ
ಗ್ರಹಿಸುತಿರ್ಪೆನಯ್ಯಾ.
ಎನ್ನ
ನೇತ್ರದ
ಕೊನೆಯಲ್ಲಿ
ನೀವು
ರೂಪುಪದಾರ್ಥವ
ಗ್ರಹಿಸುತಿರ್ಪಿರಿ:
ನಿಮ್ಮ
ನೇತ್ರದ
ಕೊನೆಯಲ್ಲಿ
ನಾನು
ರೂಪುಪ್ರಸಾದವ
ಗ್ರಹಿಸುತಿರ್ಪೆನಯ್ಯಾ.
ಎನ್ನ
ತ್ವಕ್ಕಿನ
ಕೊನೆಯಲ್ಲಿ
ನೀವು
ಸ್ಪರ್ಶನಪದಾರ್ಥವ
ಗ್ರಹಿಸುತಿರ್ಪಿರಿ:
ನಿಮ್ಮ
ತ್ವಕ್ಕಿನ
ಕೊನೆಯಲ್ಲಿ
ನಾನು
ಸ್ಪರ್ಶನಪ್ರಸಾದವ
ಗ್ರಹಿಸುತಿರ್ಪೆನಯ್ಯಾ.
ಎನ್ನ
ಶ್ರೋತ್ರದ
ಕೊನೆಯಲ್ಲಿ
ನೀವು
ಶಬ್ದಪದಾರ್ಥವ
ಗ್ರಹಿಸುತಿರ್ಪಿರಿ:
ನಿಮ್ಮ
ಶ್ರೋತ್ರದ
ಕೊನೆಯಲ್ಲಿ
ನಾನು
ಶಬ್ದಪ್ರಸಾದವ
ಗ್ರಹಿಸುತಿರ್ಪೆನಯ್ಯಾ.
ಎನ್ನ
ಹೃದಯದ
ಕೊನೆಯಲ್ಲಿ
ನೀವು
ತೃಪ್ತಿಪದಾರ್ಥವ
ಗ್ರಹಿಸುತಿರ್ಪಿರಿ:
ನಿಮ್ಮ
ಹೃದಯದ
ಕೊನೆಯಲ್ಲಿ
ನಾನು
ತೃಪ್ತಿ
ಪ್ರಸಾದವ
ಗ್ರಹಿಸುತಿರ್ಪೆನಯ್ಯಾ.
ಇಂತೆನ್ನ
ಷಡಿಂದ್ರಿಯಂಗಳ
ಸುಖವು
ನಿಮಗರ್ಪಿತವಾಯಿತ್ತು.
ನಿಮ್ಮ
ಷಡಿಂದ್ರಿಯಂಗಳು
ಎನಗೆ
ಪ್ರಸನ್ನಪ್ರಸಾದವಾಯಿತ್ತಾಗಿ
ಎನ್ನ
ಜೀವಭಾವದ
ಶನಿ
ಹಾಳಾಗಿ
ಹೋಯಿತ್ತಯ್ಯಾ
ಅಖಂಡೇಶ್ವರಾ.