ಎನ್ನ ಪಾಲಿಸೋ

ವಿಕಿಸೋರ್ಸ್ದಿಂದ

ಎನ್ನ ಪಾಲಿಸೋ ಕರುಣಾಕರ ಪನ್ನಗಶಯನ ಗದಾಧರ

ದೇವಕಿನಂದನ ಹರಿಮಧುಸೂದನ ಅಸುರಾಂತಕ ಮುರಳೀಧರ ಬಿಸರುಹನಾಭ ಸರ್ವೇಶನೆ ಮುನಿ ಮಾನಸಸಂಚಾರ ಮಾಧವ

ಪರಮಪುರುಷ ಉರಗಾಶನವಾಹನ ದುರಿತಾನಲ ವಡವಾನಲ ಸರಸಿಜೋದ್ಭವ ಗಿರಿಜಾವಲ್ಲಭನುತ ವರಸುಜನಾವಳಿ ಪಾಲನ

ಕಾಮನಪಿತ ಮುಚಕುಂದ ವರದ ರಾಜೀವನಯನ ನಾರಾಯಣ ಶ್ರೀವತ್ಸಲಾಂಛನ ಗುರುಮಹೀಪತಿ ಸುತ ಜೀವನಸಖ ಶ್ರೀಕೃಷ್ಣನ