ಎನ್ನ ಭಕ್ತನೆಂದೆಂಬರು: ಎನ್ನ ಹೊರಹಂಚೆ ಒಳಬೊಳ್ಳೆತನವನರಿಯರಾಗಿ. ಎನ್ನ ಮಾನಾಪಮಾನವೂ ಶರಣರಲ್ಲಿ ಜಾತಿವಿಜಾತಿಯೂ ಶರಣರಲ್ಲಿ ತನುಮನಧನ[ವೂ] ಶರಣರಲ್ಲಿ. ವಂಚನೆಯುಳ್ಳ ಡಂಭಕ ನಾನು. ತಲೆಯೊಡೆಯಂಗೆ ಕಣ್ಣ ಬೈಚಿಡುವೆ ಕೂಡಲಸಂಗಮದೇವಾ.