ಎನ್ನ ಮನದಲ್ಲಿ ಇದೇ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎನ್ನ ಮನದಲ್ಲಿ ಇದೇ ಪಥವಯ್ಯಾ ಬೆರಸುವಡೆ; ಪ್ರಾಣದ ಮಥನಭಾವ ನಟ್ಟು ತನುಸ್ಥಿತಿ ಮರೆದು
ಭ್ರಾಂತು ಸೂತಕವೆಲ್ಲಾ [ನಿವಾ]ರಿಸಿ ಹೋದವು ಶೂನ್ಯಸಿಂಹಾಸನದ ಮೇಲೆ ಕೂಡಲಚೆನ್ನಸಂಗಾ ನಿಮ್ಮ ಶರಣನ ಪ್ರಭೆಯಿಂದ.