ಎನ್ನ ಸಂಸಾರಸೂತಕವ ತೊಡೆದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎನ್ನ ಸಂಸಾರಸೂತಕವ ತೊಡೆದು
ನಿಜಲಿಂಗದಲ್ಲಿ ನಿರಹಂಕಾರವೆಂಬ ಘನವ ತೋರಿದನಯ್ಯಾ ಒಬ್ಬ ಶರಣನು. ಎನಗಾರು ಇಲ್ಲೆಂದು ಪ್ರಭುದೇವರೆಂಬ ಒಬ್ಬ ಶರಣನ ಎನ್ನ ಕಣ್ಣಮುಂದೆ ಕೃತಾರ್ಥನ ಮಾಡಿ ಸುಳಿಸಿದನಯ್ಯಾ ಆ ಶರಣನು. ಆ ಶರಣನ ಕೃಪೆಯಿಂದ ಪ್ರಭುದೇವರೆಂಬ ಘನವ ಕಂಡು
ಮನ ಮನ ಲೀಯವಾಗಿ ಘನ ಘನ ಒಂದಾದ ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ ಅಲ್ಲಯ್ಯನೆಂಬ ಮಹಿಮಂಗೆ ನಮೋ ನಮೋ ಎನುತಿರ್ದೆನು.