ಎನ್ನ ಸದ್ಗರುಸ್ವಾಮಿ ಎನಗೆ ಕರುಣಿಸಿದ ಕಾರುಣ್ಯವ ನಾನೇನೆಂದುಪಮಿಸುವೆನಯ್ಯಾ ? ಗುರುಲಿಂಗವು ಸಾಕ್ಷಾತ್ ಪರಶಿವನಿಂದ ವಿಶೇಷವು ! ಜ್ಯೋತಿಯಲೊದಗಿದ ಜ್ಯೋತಿಯಂತಾಯಿತ್ತು
ದರ್ಪಣದೊಳಗಣ ಪ್ರತಿಬಿಂಬದಂತಾಯಿತ್ತು
ಪದಕದೊಳಗಣ ರತ್ನದಂತಾಯಿತ್ತು; ರೂಪದ ನೆಳಲಿನ ಅಂತರಂಗದಂತಾಯಿತ್ತು
ಕೂಡಲಚೆನ್ನಸಂಗಯ್ಯಾ
ದರ್ಪಣಕ್ಕೆ ದರ್ಪಣವ ತೋರಿದಂತಾಯಿತ್ತು
ಎನ್ನ ಸದ್ಗರುವಿನುಪದೇಶವೆನಗಯ್ಯಾ.