ಎನ್ನ ಹೃದಯಕಮಲ ಮಧ್ಯದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎನ್ನ ಹೃದಯಕಮಲ ಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ_ ಎನ್ನ ಕ್ಷಮೆಯೆ ಅಭಿಷೇಕ
ಎನ್ನ ಪರಮವೈರಾಗ್ಯವೆ ಪುಷ್ಪದಮಾಲೆ ಎನ್ನ ಸಮಾಧಿಸಂಪತ್ತೆ ಗಂಧ
ಎನ್ನ ನಿರಹಂಕಾರವೆ ಅಕ್ಷತೆ
ಎನ್ನ ಸದ್ವಿವೇಕವೆ ವಸ್ತ್ರ
ಎನ್ನ ಸತ್ಯವೆ ದಿವ್ಯಾಭರಣ ಎನ್ನ ವಿಶ್ವಾಸವೆ ಧೂಪ
ಎನ್ನ ದಿವ್ಯಜ್ಞಾನವೆ ದೀಪ
ಎನ್ನ ನಿಭ್ರಾಂತಿಯೆ ನೈವೇದ್ಯ
ಎನ್ನ ನಿರ್ವಿಷಯವೆ ತಾಂಬೂಲ ಎನ್ನ ವರಿõ್ಞನವೆ ಘಂಟೆ
ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ
ಎನ್ನ ಶುದ್ಧಿಯೆ ನಮಸ್ಕಾರ
ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು_ ಈ ಪರಿಯಲ್ಲಿ ಎಮ್ಮ ಗುಹೇಶ್ವರಲಿಂಗಕ್ಕೆ ಪ್ರಾಣ (ಲಿಂಗ) ಪೂಜೆಯೆ ಮಾಡಿ ಬಾಹ್ಯಕ್ರೀಯ ಮರೆದನು ಕಾಣಾ ಸಂಗನಬಸವಣ್ಣಾ.