ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು

ವಿಕಿಸೋರ್ಸ್ದಿಂದ



Pages   (key to Page Status)   

ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು
ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೇರುವ. ಎಮಗೆ ಆರೂ ಇಲ್ಲವೆಂಬಿರಿ
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು. ಎಮಗೆ ಆರೂ ಇಲ್ಲವೆಂಬಿರಿ
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ
ಕೂಡಲಸಂಗಮದೇವಾ.