ಎರಳೆ ತಿರುಗಿ, ಯತಿಯಂತೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎರಳೆ ಯತಿಯಂತೆ
ಕಾಕ ಪಿಕದಂತಿರಬೇಡವೆ ? ತಿಟ್ಟನೆ ತಿರುಗಿ
ತೊಟ್ಟನೆ ತೊಳಲಿ ಬಳಲುವರ ಕಳ ಹೇಸಿಕೆಯ ನೋಡಾ! ಇರುಳು ಹಗಲೆನ್ನದೆ ತಿರುಗುವವರ ಕಂಡು ಹೇಸಿದೆ. ಅರಿದಡೆ ಶರಣ
ಮರೆದಡೆ ಮಾನವ. ಸತ್ತ ಕಸನ ಹೊತ್ತುಕೊಂಡು ಊರೂರಿಗೆ ಮಾರುವ ಕಾಶಾಂಬರಧಾರಿಗಳನೊಲ್ಲ
ನಿಜಗುರು ಶಂಕರದೇವ.