ಎಲೆ ಶಿವನೆ ನಿಮ್ಮಲ್ಲಿ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎಲೆ ಶಿವನೆ ನಿಮ್ಮಲ್ಲಿ ಸಾಲವ ಕೊಂಡು ನಿಮ್ಮ ಶರಣ ಶಿವಲೋಕಕ್ಕೆ ಹೋದವನಲ್ಲಾ: ಪೃಥ್ವಿಯ ಸಾಲವ ಪೃಥ್ವಿಗೆ ಕೊಟ್ಹು
ಅಪ್ಪುವಿನ ಸಾಲವ ಅಪ್ಪುಗೆ ಕೊಟ್ಟು
ತೇಜದ ಸಾಲವ ತೇಜಕ್ಕೆ ಕೊಟ್ಟು
ವಾಯುವಿನ ಸಾಲವ ವಾಯುವಿಗೆ ಕೊಟ್ಟು
ಆಕಾಶದ ಸಾಲವ ಆಕಾಶಕ್ಕೆ ಕೊಟ್ಟು ಪ್ರಸಾದವನಾರಿಗೆಯೂ ಕೊಡಲಿಲ್ಲೆಂದು ಕೂಡಲಚೆನ್ನಸಂಗನಲ್ಲಿ ಹೂಣೆಹೊಕ್ಕ ಶರಣಂಗೆ ಮಿಗೆ ಮಿಗೆ ನಮೋ ನಮೋಯೆಂಬೆ.