ಎಲ್ಲರ ಗಂಡರು ಬೇಂಟೆಯ ಹೋದರು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಎಲ್ಲರ ಗಂಡರು ಬೇಂಟೆಯ ಹೋದರು
ನೀನೇಕೆ ಹೋಗೆ
ಎಲೆ ಗಂಡನೆ ಸತ್ತುದ ತಾರದಿರು
ಕೈ ಮುಟ್ಟಿ ಕೊಲ್ಲದಿರು. ಅಡಗಿಲ್ಲದ ಮನೆಗೆ ಬಾರದಿರು. ದೇವರ ಧರ್ಮದಲೊಂದು ಬೇಂಟೆ ದೊರೆಕೊಂಡಡೆ ಕೂಡಲಸಂಗಮದೇವಂಗರ್ಪಿತ ಮಾಡುವೆ
ಎಲೆ ಗಂಡನೆ.