ಎಲ್ಲಾ ಗುಣಂಗಳನೊಲ್ಲೆನೆಂದು ಕಳೆದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎಲ್ಲಾ ಗುಣಂಗಳನೊಲ್ಲೆನೆಂದು ಕಳೆದು
ಪ್ರಾಣಲಿಂಗದಲ್ಲಿ ಪ್ರವೇಶವ ಮಾಡಿದನಯ್ಯಾ. ಆಯತ ಸ್ವಾಯತದಿಂದ ನೋಡಿ ಲಿಂಗಗಭೀರ ನಿಸ್ಸಂಗಿ ನೋಡಾ. ಮಾಟ ಕೂಟವೆಂಬ ಭ್ರಾಂತಳಿದಾ ಮನದಲ್ಲಿ ತ್ರಿವಿಧವ ನೆಮ್ಮಿಸಿ. ಸಾಹಿತ್ಯವಾದ ಕೂಡಲಚೆನ್ನಸಂಗಾ ನಿಮ್ಮ ಶರಣ.