ಎಲ್ಲ ಎಲ್ಲವನರಿಯಬಹುದು; ಸಾವನರಿಯಬಾರದು. ಸರ್ವವಿದ್ಯೆ ಸಕಲವ್ಯಾಪ್ತಿಯನರಿಯಬಹುದು; ಸಾವನರಿಯಬಾರದು. ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿ ದೇವ ದಾನವ ಮಾನವರಿಗೆಲ್ಲಗೆಯೂ ಸಾವು ! ಮಹಾಪುರುಷರಿಗೆಯೂ ಸಾವು ! ಶಿವ ಶಿವಾ
ಈ ಸಾವನರಿಯದೀ ಲೋಕ ! ಪ್ರಪಂಚವ ಮರೆದು ಲಿಂಗದಲ್ಲಿ ನೆನಹು ನೆಲೆಗೊಂಡಡೆ ಆ ಮಹಿಮಂಗೆ ಸಾವಿಲ್ಲ. ಈ ಸಾವನರಿಯದ ಅರೆಮರುಳಗಳ ಅರಿವು ಮಾನ (ಮಹಾ?) ಹಾನಿ ಕಾಣಾ ಗುಹೇಶ್ವರಾ.