ಎಳೆವರದಲ್ಲಿ ಮೋಹಮೊಳೆ ಹುಟ್ಟಿತ್ತು,

ವಿಕಿಸೋರ್ಸ್ದಿಂದ




Pages   (key to Page Status)   

ಎಳೆವರದಲ್ಲಿ ಮೋಹಮೊಳೆ ಹುಟ್ಟಿತ್ತು
ಗುರುಹಸ್ತದಲ್ಲಿ ಅಂಕುರವಾಯಿತ್ತು
ಏಳೆಲೆ ಹೋಯಿತ್ತು ಬಳಗದ ನಡುವೆ. ಕೇಳೆಲೆಯವ್ವಾ
ನೀನು ಕೇಳು ತಾಯೆ. ಒಂಬತ್ತೆಲೆ ಎಂದಿಂಗೆ ಪರಿಪೂರ್ಣವಾಯಿತ್ತು ನೋಡವ್ವಾ. ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಲೋಕದವರ ಸಂಬಂಧವಿಲ್ಲೆಂದು ಬಿಟ್ಟು ತೊಲಗಿದೆನು ಕಾಣಾ ಎಲೆಯವ್ವಾ.