ಏಕಭಾಜನ ಏಕಭಾಜನವೆಂದೆಂಬರು; ನಾವಿದನರಿಯೆವಯ್ಯಾ. ಅಂಗದ ಮೇಲೆ ಪ್ರಾಣಲಿಂಗಪ್ರತಿಷೆ*ಯಾದ ಬಳಿಕ
ಲಿಂಗಕ್ಕೆಯೂ ತನಗೆಯೂ ಏಕಭಾಜನವಲ್ಲದೆ ಭಿನ್ನಭಾಜನವುಂಟೆ ? ಲಿಂಗಕ್ಕೆಯೂ ತನಗೆಯೂ ಏಕಭಾಜನವಾಗದನ್ನಕ್ಕರ ಅಂಗದ ಕಳೆಯಲ್ಲಿ ಲಿಂಗವ ಧರಿಸಿಕೊಳಬಹುದೆ ? ಇದನರಿದು ಏಕಭಾಜನವಾಗದಿರ್ದಡೆ ಅಂತು ದೋಷ. ಅರಿಯದೆ ಏಕಭಾಜನವಾದಡೆ ಇಂತು ದೋಷ. ಈ ಕುಳಸ್ಥಳದ ಭೇದವ ಭೇದಿಸಬಲ್ಲ ಕೂಡಲಚೆನ್ನಸಂಗಾ
ನಿಮ್ಮ ಶರಣ.