Library-logo-blue-outline.png
View-refresh.svg
Transclusion_Status_Detection_Tool

ಏನನೋದಿದರೇನಯ್ಯಾ? ಏನಕೇಳಿದರೇನಯ್ಯಾ? ಏನಹಾಡಿದರೇನಯ್ಯಾ?

ವಿಕಿಸೋರ್ಸ್ದಿಂದ
Jump to navigation Jump to searchPages   (key to Page Status)   


ಏನನೋದಿದರೇನಯ್ಯಾ? ಏನಕೇಳಿದರೇನಯ್ಯಾ? ಏನಹಾಡಿದರೇನಯ್ಯಾ? `ಓದಿ ಮರುಳಾದೆಯೋ ಕೂಚಿಭಟ್ಟ'ರೇ! ಎಂದು. ಗಿಣಿಯೋದಿ ತನ್ನ ಹೇಲ ತಾ ತಿಂದಂತೆ
ಏಕಲಿಂಗನಿಷ್ಠಾಚಾರ ಸ್ವಾನುಭವವಿವೇಕ ಸಿದ್ಧಾಂತ ನಿರ್ಣಯವಿಲ್ಲದೆ
ಮಾತಿಗೆ ಮಾತುಕಲಿತು ನುಡಿಗೆ ನುಡಿಯ ಕಲಿತು ತರ್ಕಮರ್ಕಟರಂತೆ ಹೋರುವ ಬಯಲಸಂಭ್ರಮದ ತರ್ಕಿಗಳ ಕಂಡರೆ
ಮಾಗಿಯ ಕೋಗಿಲೆಯಂತೆ ಮುಖ ಮುನಿಸಾಗಿರಿಸಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.