ವಿಷಯಕ್ಕೆ ಹೋಗು

ಏನುಯೇನೂ ಇಲ್ಲದ ಠಾವಿನಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಏನುಯೇನೂ ಇಲ್ಲದ ಠಾವಿನಲ್ಲಿ ನಾನೀನೆಂಬುದು ಇದೇನು ಕಾರಣವೋ?. ಇದು ನಿನ್ನ ವಿನೋದಾರ್ಥಕಾರಣವೆಂಬುದು ಮಾನವರಿಗೆ ತಿಳಿಯಬಾರದು ನೋಡಾ. ತಾ ಹುಟ್ಟಿದಲ್ಲಿಯೆ ಮೂರುಲೋಕ ಹುಟ್ಟಿತ್ತು. ತಾನಳಿದಲ್ಲಿಯೆ ಮೂರುಲೋಕವಳಿಯಿತ್ತು. ನಾ ನೀನೆಂಬುದಳಿದಲ್ಲಿಯೆ ನಿನ್ನ ನೆಲೆ ಸ್ವಯಂಭುವಾಯಿತ್ತು. ಸ್ವಯಂಭುವಳಿದು ಶೂನ್ಯವಾಯಿತ್ತು. ಮೂಲವಸ್ತುವೆಂದು ಬೇರುಂಟೆ ತಾನಲ್ಲದೆ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.