Pages(key to [[Help:Page Status{{!}}Page Status]])
ಏನ ಕಂಡಡೇನಯ್ಯಾ ತನ್ನ ಕಾಣದಾತ ಕುರುಡ. ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ. ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ. ದಿಟದಿಂತ ತನ್ನ ತಾ ಕಾಣಬೇಕು ದಿಟದಿಂದ ತನ್ನ ತಾ ಕೇಳಬೇಕು ದಿಟದಿಂದ ತನ್ನ ತಾ ಮಾತಾಡಬೇಕು. ಇದೆ ತನ್ನ ನೆಲೆ ಸ್ವಭೂಮಿ ಸ್ವಸ್ವರೂಪು ಕಾಣಾ_ಗುಹೇಶ್ವರಾ